Savikampanadanthe maathu baralu,
Pratheekshanavee sathoshavendiralu,
Endaritu sada nee nagalu
Dhuhkkavu nodi mugalnakkeethu…neene enalu!
Posted by Unknown at 10:12 PM 0 comments
Labels: Vadi
ಮಾಡಿದ ತಪ್ಪೇನೆಂದು...
ಕಾದು ಕುಳಿತಿದ್ದೆ ಅವಳ ಕರೆಗಾಗಿ.. ಅವಳ ಶುಭ ಆರೈಕೆಗಾಗಿ ಇಂದು ,
ಮರೆತೇ ಹೋಗಿಹಳು ಇಂದು ನನ್ನ ಹುಟ್ಟು ಹಬ್ಬದ ದಿನವೆಂದು,
ನೆನಪಾಗುತಿದೆ ಆ ದಿನಗಳು... ಅವಳೊಡನೆ ಕಳೆದ ಮಧುರ ಕ್ಷಣಗಳು,
ಪ್ರತಿ ವರುಷ ಕರೆ ಮಾಡಿ ಕೇಳುತ್ತಿದ್ದಳು ನನ್ನ ಕರೆಯೆ ಮೊದಲ ಎಂದು..
ಕಣ್ನಿಂದ ಹನಿ ಜಾರಿತು ಅರಿಯದೆ ನಾ ಮಾಡಿದ ತಪ್ಪೇನೆಂದು...
Posted by Unknown at 3:51 AM 0 comments
Labels: Anoop
ಮತ್ತೆ ಕಂಡಳು
ಮತ್ತೆ ಕಂಡಳು ಅವಳು, ಕಾಡುವ ಕಣ್ಣಿನವಳು,
ಮೊದಲ ನೋಟದಲ್ಲೇ ಇರಿದು ನನ್ನ ಕೊಂದವಳು,
ನನ್ನ ಕಲ್ಪನೆಯೇ ಆಕರ ಪಡೆದು ಬಂದಿದ್ದ ಎನ್ನ ಪ್ರೇಮ ದೇವತೆ ಅವಳು...!!!
ಮನದಲ್ಲಿ ಹುದುಗಿದ್ದ ಆ ನೆನಪಾ ಮತ್ತೆ ಕದಲಿದಳು,
ನನ್ನ ಹೃದಯದಲಿ ಮಾತೊಮ್ಮೆ ಜೀವ ಜಾಲ ಹರಿಯುವಂತೆ ಮಾಡಿದಳು…!!!
Posted by Unknown at 3:47 AM 0 comments
Labels: Anoop
ಮರೆತು ಬಿಡು ನನ್ನ ಎಂದಳು, ನಾ ನಿನ್ನ ಬಿಟ್ಟು ಹೋಗುತಿರುವೆನೆಂದಳು ..
ಅಲ್ಲಲ್ಲಿ ಬರೆದಿದ್ದ ಅವಳ ಹೆಸರ ಬಂದು ಅಳಿಸಿದಳವಳು!!!,
ಅದು ಹೇಗೆ ಸಾಧ್ಯ ಅವಳಿಗಾದರೂ ತಿಳಿಯಲು,
ನಾ ಕೊರೆದಿರುವೆ ಅವಳ ಹೆಸರ ಹೃದಯದ ಪ್ರತಿ ಪದರದಲು!!!
Posted by Unknown at 3:50 AM 0 comments
Labels: Anoop
ನೀ ನನ್ನ ಮಾತೆಂದು ನಾ ಅಂದು ಕೊಂಡೆ,
ಮಾತು ಮುಗಿಸಿ ನೀ ನನ್ನ ಮೂಗನ ಮಾಡಿದೆ.
ನೀ ನನ್ನ ನೋಟವೆಂದು ನಾ ಅಂದು ಕೊಂಡೆ,
ಕಣ್ಣು ಬಿಟ್ಟು ನೋಡದೇ ನೀ ನನ್ನ ಕುರುಡನ ಮಾಡಿದೆ.
ನೀ ನನ್ನ ಭಾವನೆ ಎಂದು ನಾ ಅಂದು ಕೊಂಡೆ,
ಭಾವನೆಗಳಿಗೆ ಬೆಲೆ ಕೊಡದೆ ನೀ ನನ್ನ ಮನವ ಬಂಜರು ಮಾಡಿದೆ.
ಹೃದಯದ ತುಂಬೆಲ್ಲ ನಿನ್ನ ನಾ ತುಂಬಿ ಕೊಂಡಿದ್ದೆ,
ಈ ಕ್ಷಣವೇ ಹೊರಗೆ ಬಾ.....ನಿಂತು ಹೋದೀತು ನನ್ನ ಹೃದಯ......
----ಅನೂಪ್
Posted by Unknown at 2:57 AM 0 comments
Labels: Anoop
ಧಿಕ್ಕರಿಸಿದೆ ನನ್ನ ಪ್ರೀತಿಸಿದವರ ನಿನಗಾಗಿ,
ಪ್ರೀತಿಸಿದೆ ನಿನ್ನನ್ನೇ ನನ್ನ ಸರ್ವಸ್ವವಾಗಿ,
ಅರಿಯದಂತೆ ಆರಾಧಿಸಿದೆ ನನ್ನ ಹೃದಯದ ಮಿಡಿತ ನೀನೆಂದು!!!
ನೀ ನನ್ನ ಧಿಕ್ಕರಿಸಿದ ಕ್ಷಣವೇ ಅರಿವಾಯಿತು...
ನಾ ಧಿಕ್ಕರಿಸಿದವರ ನೋವು ಅದಿನೆಸ್ಟು ಆಳವಾಗಿರಬಹುದೆಂದು!!!
----ಅನೂಪ್
ಸಾಕು ಈ ನೋವು
ದಿಕ್ಕರಿಸು ನಿನ್ನ ಪ್ರೀತಿಸಲಾರದವರನ್ನು,
ಪ್ರೀತಿಸು ನಿನ್ನ ಪ್ರೀತಿಸುವವರನ್ನು
ಅರಿತು ಆರಾಧಿಸು ನಿನ್ನ ಹೃದಯದ ಮಿಡಿತ ಯಾರೆಂದು!!!
ನೀ ಇದನರಿತು ಪ್ರೀತಿಸಿದ ಕ್ಷಣವೇ ಅರಿವಾಗುತ್ತೆ...
ನೀ ಆರಾಧಿಸಿದವರ ಒಲವು ಅದಿನೆಸ್ಟು ಆಳವೆಂದು!!!!
--ಹರ್ಷ
Posted by Unknown at 1:19 AM 0 comments
Labels: Anoop
ಮನದ ಜ್ವಾಲಾಮುಖಿಯ ತಂಪಾಗಿಸುವ ಕಲ್ಪತರು ಗೆಳೆತನ.
ಇದನರಿತ ಒಬ್ಬ ಗೆಳೆಯನಿದ್ದರೆ ಸಾಕು.
ಇದ ತಿಳಿಯದ ಸಾವಿರ ಸ್ವಾರ್ಥ ಮೂರ್ಖರು ಏಕೆ ಬೇಕು...???
Posted by Unknown at 1:35 AM 0 comments
Labels: Anoop