CLICK HERE FOR THOUSANDS OF FREE BLOGGER TEMPLATES »

Tuesday, January 20, 2009

ನೆಮ್ಮದಿ ಒಂದೇ ನನಗಿಂದು

ಅಂದದ ಹಕ್ಕಿಯ ಚಂದವ ಕಂಡು ತಂದೆನು ಹೃದಯದ ಗೂಡಿಗೆ ಅಂದು.

ಹಣ್ನನು ಕೊಟ್ಟು, ಆರೈಕೆ ಮಾಡಿ... ಕಥೆಯನು ಹೇಳಿದೆ ದಿನಕೊಂದು.

ಹಕ್ಕಿಯೂ ಬೆಳೆಯಿತು... ರೆಕ್ಕೆಯೂ ಬಲಿಯಿತು....!!!

ಹಾರಿತು ಆಕಾಶದ ಆಚೆಗೆ ಇಂದು....ಕೇಳದೆ ನಾನು ಯಾರೆಂದು....

ನೆಮ್ಮದಿ ಒಂದೆ ನನಗಿಂದು... ಹಾರಲು ಕಲಿಸಿದವ ನಾ ಎಂದು..!!!

------- ಅನೂಪ್

ಅಂದದ ಶಬ್ದವ ಚಂದವ ಕಂಡು ತಂದೇನು ಕವಿತೆಯ ಸಾಲಿಗೆ ಅಂದು.
ಪ್ರತಿ ಸಾಲಲ್ಲು ಇಟ್ಟು, ಪ್ರಾಸವ ಮಾಡಿ... ಕವಿತೆಯ ಮಾಡಿದೆ ದಿನಕ್ಕೊಂದು.
ಶಬ್ದವು ಬೆಳೆಯಿತು... ಎಲ್ಲರೂ ಬಳಸಿದರು...!!!

ಹಾರಿತು ಕವಿತೆಯ ಆಚೆಗೆ ಇಂದು... ಕೇಳದೇ ಬಳಸಿದವ್ರ್ ಯಾರೆಂದು...
ನೆಮ್ಮದಿ ಒಂದೇ ನನಗಿಂದು... ಶಬ್ದವ ಬಳಸಿದವ ನಾ ಎಂದು...!!!

--Harsha MP


ತಪ್ಪು ಮಾಡಿದೆ ನಾನು

ಕಲ್ಲನ್ನು ಶಿಲೆ ಮಾಡಬಲ್ಲ ಕಲೆಗಾರ ನಾನು, ಕೆತ್ತಿದರು ಕಲ್ಲಾಗಿ ಉಳಿದೆ ನೀನು.
ತಪ್ಪು ಮಾಡಿದೆ ನಾನು, ಕರಗದ ಕಲ್ಲಿಗೆ ಕಣ್ಣೀರು ಇಟ್ಟೆ ನಾನು.

ಕನಸನ್ನು ನನಸು ಮಾಡಬಲ್ಲ ಛಲಗಾರ ನಾನು, ಬಯಸಿದರೂ ಕನಸಾಗಿ ಉಳಿದೆ ನೀನು.
ತಪ್ಪು ಮಾಡಿದೆ ನಾನು, ಕಾಮನಬಿಲ್ಲಿಗೆ ಕೈ ಚಾಚಿದೆ ನಾನು.

ಮೀನ ಹೆಜ್ಜೆಯ ಹುಡುಕಬಲ್ಲ ಚತುರ ನಾನು, ಹುಡುಕಿದರು ಸಿಗದಷ್ಟು ದೂರ ಹೋದೆ ನೀನು.
ತಪ್ಪು ಮಾಡಿದೆ ನಾನು, ಪ್ರವಾಹದೆದುರು ಈಜ ಪ್ರಯತ್ನಿಸಿದೆ ನಾನು......
------- ಅನೂಪ್

ತಪ್ಪು ಮಾಡಿಲ್ಲ ನೀನು

ಕೆತ್ತಿದಾ ಕಲ್ಲು ಶಿಲೆ ಆಗಿದೆ ಇಂದು, ಪ್ರೀತಿ ಇಂದ ನೋಡಿದರೆ ಕಾಣುವುದು ಅವಳ ಮುಗುಳ್ನಗೂ
ತಪ್ಪು ಮಾಡಿಲ್ಲ ನೀನು, ಪ್ರೀತಿಯ ಕಣ್ನೆರಲ್ಲಿ ಕಳೆದು ಸಿಕ್ಕೇ ನೀನು.

ಬಯಸಿದೆಲ್ಲಾ ಕನಸಾಗಿಸಿದೆ ನೀನು, ಕನಸಿನಿಂದ ಎದ್ದು ಕೇಳು ಕೇಳಿಸುವುದು ಅವಳ ಕೂಗು
ತಪ್ಪು ಮಾಡಿಲ್ಲ ನೀನು, ಪ್ರೀತಿಯ ಕಾಮನಬಿಲ್ಲ ಮುರಿದು ಗೆದ್ದೆ ನೀನು.

ಮೀನಿನ ಹೆಜ್ಜೆ ಹಿಡಿದ ಬಲೆಗಾರ ನೀನು, ನೀರಿನಿಂದಾಚೇ ಹುಡುಕು ಸಿಗುವುದು ಅವಳ ಹೆಜ್ಜೆ
ತಪ್ಪು ಮಾಡಿಲ್ಲ ನೀನು, ಪ್ರೀತಿಯ ಪ್ರವಾಹದಲ್ಲಿ ಮುಳುಗಿ ಎದ್ದೆ ನೀನು.

--Harsha MP

Sunday, January 18, 2009

About Me

ನೆನಪುಗಳ ನೆರಳಲ್ಲಿ
ಸೋಲಿನ ಸುಳಿಗಳಲ್ಲಿ
ಬೆದರಿಕೆಯ ಭಯದಲ್ಲಿ
ದಾರಿ ಕಾಣದ ಅಲೆಮಾರಿ ನಾ!

ಮರೆಯಲಾರದ ದು:ಸ್ವಪ್ನಗಳಲ್ಲಿ
ಬಚ್ಚಿಟ್ಟ ನಗ್ನ ಸತ್ಯಗಳಲ್ಲಿ
ಗುರಿ ಮುಟ್ಟದ ನರಳಿಕೆಯಲ್ಲಿ
ಸುಳ್ಳಿನ ಸರಪಣಿಗಳಲ್ಲಿ ಬಂದಿತನು ನಾ!

ಗೆಳೆಯರ ನೋವಿಸುತ
ಪ್ರೇಮಿಗಳ ಅಗಲಿಸುತ
ಬಂಧುಗಳ ವಂಚಿಸುತ
ಜನಸಾಗರದಿಂದ ತಿರಸ್ಕ್ರುತನು ನಾ!

ನವ ಆರಂಭವ ನೋಡುವ ಕಾತರದಿ ಕಾದು ನಿಂತಿಹ
ನಿಮ್ಮ ಬಸವಾ......

My Comments

ನಾಳೆಯ ನಿರೀಕ್ಷೆಯಲ್ಲಿ...
ಗೆಲುವಿನ ಗದ್ದುಗೆಯಲ್ಲಿ..
ವಿಶ್ವ ಗೆಲ್ಲುವ ವಿಶ್ವಾಸದಲ್ಲಿ...
ದಾರಿ ತೋರುವ ಆಲೆಮಾರಿ ನೀನಾಗು...

ದುಸ್ವಪ್ನಗಳ ಮರೆತು...
ನಜ್ಞ ಸತ್ಯಗಳ ಸುಟ್ಟು...
ಗುರಿ ಮುಟ್ಟುವ ಹಂಬಲ ದಲ್ಲಿ...
ಕಷ್ಟದ ಸರಪಣಿಗಳಾ ಬಿಡಿಸಿ ಮುನ್ನುಗು ನೀ...

ಗೆಳೆಯರ ಬೆನ್ನೆಲುಬಾಗಿ....
ನಿಸ್ವಾರ್ತ ಪ್ರೀತಿಯ ಸವಿಯುತ್ತಾ...
ಬಂದುಗಳ ನೆನೆಯುತ್ತ...
ಜನಸಾಗರದಲ್ಲಿ ಎದ್ದು ನಿಲ್ಲುವಂತವನಾಗೂ...

ನಿನ್ನ ಆರಂಬವ ನೋಡುವ ಹರುಷದಲ್ಲಿ ಇದ ಬರೆದು ಕೂತಿರುವೆ...
ನಿನ್ನ ಗೆಳೆಯ...

Wednesday, December 31, 2008

ಕಣ್ಣೀರ ಹನಿಗಳು

ನನ್ನ ಕವಿತೆಗಳಿವು ಶಬ್ಧಗಳ ಜೂಡಣೆ ಅಲ್ಲ...
ಸಮಯ ಕೆಳೆಯಲು ಬರೆದ ಪಡಾಕುಂಜ ವಲ್ಲ..
ಅಂತರಂಗದ ಅಂತರಾಳದಿಂದ ಬಂದ ನೋವು ತುಂಬಿದ ಭಾವನೆಗಳು...
ಉಲ್ಲಾಸ ವಿಲ್ಲದ ಮಾನಸಿನಿಂದ ಆದ ಗುಣವಾಗದ ಗಾಯಗಳು...
ನಿದ್ದೆ ಬಾರದೆ ಕಳೆದ ಕರಾಳ ರಾತ್ರಿಯ ಅನುಭವಗಳು...
ಹೇಳಲಾಗಾದೇ.. ಪರಿತಪಿಸಲಾಗಾದೇ ಹೃದಯದಿಂದ ಹಾಗೆ ಜಾರಿದ ಕಣ್ಣೀರ ಹನಿಗಳು..

------- ಅನೂಪ್

My ಕಾಮೆಂಟ್ಸ್

ಸ್ನೇಹದ ನುಡಿಗಳು


ನನ್ನ ಸ್ನೇಹ ನುಡಿ ಇದು ನಿನಗೆ ಸಮಾಧಾನ ಅಲ್ಲ...
ನನ್ನ ನಾ ಕವಿ ಆಗಿಸಲು ಬರೆದ ಪ್ರತಿ ಕವನ ವಲ್ಲ....
ಸ್ನೇಹದ ಸಂಕೋಲೇಗೆ ಕಟ್ಟುಬಿದ್ದು ಬಂದ ಪ್ರೀತಿಯ ಬೈಗುಳಗಳು...
ಕೊರಗಬೇಡ ಹಳೆಯ ಗಾಯಗಳಿಗೆ, ಹಳೆಯ ಕರಾಳ ದಿನಗಳಿಗೆ...
ಹೊರಡು ಹೋರಾಡಲು ಬರುವ ದಿನಗಳಿಗೆ, ಬರುವ ಕಷ್ಟಗಳಿಗೆ...
ನೋಡಲಾಗದೇ ತುಟಿಗಳಿಂದ ಹಾಗೆ ಜಾರಿದ ಸ್ನೇಹದ ನುಡಿಗಳು...

Friday, December 26, 2008

ಮರೆತು ಹೋಗು ಎಲ್ಲವನ್ನು

ಕಲ್ಲಗಲಿ ಮನಸು, ಕರಗೋಗಲಿ ಕನಸು
ಮರೆತು ಹೋಗು ಎಲ್ಲವನ್ನು, ನನ್ನೊಂದಿಗೆ ಕಳೆದ ಕ್ಷಣಗಳನ್ನು,
ಬಾಳಿನಲ್ಲಿ ತುಂಬಿರಳಿ ನಿನ್ನವನ ನೆನಪು,
ತಪ್ಪಿಯೂ ಬಾರದಿರಲಿ ಎಂದೆಂದೂ ನನ್ನ ನೆನಪು...
------- ಅನೂಪ್

My Suggestion:
ಮ್ರುದುವಾಗಲಿ ಮನಸು, ನನಸಾಗಲಿ ಕನಸು

ಮರೆತು ಬಿಡು ಎಲ್ಲವನ್ನು, ಸಿಹಿ ಅನುಭವದ ಹೊರತು

ಬಾಳಿನಲ್ಲಿ ತುಂಬಿರಲಿ ಮುಂದ್ ಬರುವವಳ ನಿರೀಕ್ಷೆ

ತಪ್ಪಿ ಬಂದರೂ ಅವಳ ನೆನಪು, ಮರೆತು ಬಿಡು ನೆನಪು ತಂದ ಆ ಮನಸಾ...

Tuesday, December 23, 2008

ಎನಿತು ಚೆಂದ



My comments:

ಏನಿತು ಚೆಂದ ಈ ನಿನ್ನ ಕವನ

ಆ ಮರೆಯದ ಹಾಡನ್ನೇ ಮರೇಸುವಂತ ನಿನ್ನ ಪದಗಳ ಅಂದ

ಮತ್ತೊಮ್ಮೆ ಓದಿದರೆ ಸಾಕು ಹೇಳಬೇಕೆನಿಸಿತು ನನ್ನಾಕೆಗೆ ಈ ನಿನ್ನ ಕವನ

ಬರುತಿರಲಿ ಹೀಗೆ ಇಂತಾ ನಿನ್ನ ಕವನ, ನಿರಂತರ ನಿರಂತರ!!
--Harsha...

Thursday, November 13, 2008

ಒಂದೇ ನೆನಪು.

ನೆನಪಿನ ಬುತ್ತಿ ಬಿಚ್ಛಿದರೆ ಕಾಡುವುದು ಒಂದೇ ನೆನಪು.
ಕಣ್ಣು ಮುಚ್ಚಿದರೆ ಕಾಣುವುದು ಒಂದೇ ನಗು.
ಕಿವಿ ಮುಚ್ಚಿ ಕುಳಿತರೆ ಕೇಳುವುದು ಒಂದೇ ಮಾತು.

ಬಡಿತದಲು ಕೇಳುತಿದೆ ನಿನ್ನ ಹೆಸರು ಚಿನ್ನ.
ಭಾವನೆಯ ಹೇಳುವುದರಲಿ ಬಿಟ್ಟು ಹೋದೆ ಏಕೆ ನನ್ನ......
ಪ್ರತಿ ಕ್ಷಣವೂ ಮನ ಕೇಳುತಿದೆ ಈಗೇಲ್ಲಿ ಇರುವಳು ವಂದನ....
ಈಗೇನು ಮಾಡುತಿಹಳು ವಂದನ......
---- ಅನೂಪ್