ಎಂದು ನೀ ಹೊಡೆಯಲಿಲ್ಲ, ಎಂದು ನೀ ಬೈಯ್ಯಾಲಿಲ್ಲ.
ಕಣ್ಣ ಸನ್ನೆಯಲ್ಲೇ ತಪ್ಪ ನೀ ತೂರಿದೆ, ತೀಕ್ಷ್ಣ ನೋಟದಲ್ಲೇ ಅದನ್ನು ನೀ ತಿದ್ದಿದೆ.
ಎಂದಿಗೂ ಓದು ಎಂದು ನೀ ಹೇಳಲಿಲ್ಲ, ನೀ ಓದುವ ಬಗೆಯಲ್ಲೇ ನನಗದನು ಕಲಿಸಿದೆ.
ಸದ್ಮಾರ್ಗದಲಿ ನಡೆ ಎಂದು ನೀ ಹೇಳಲಿಲ್ಲ, ನನ್ನ ಮುಂದೆ ನೀ ನಿಂತು ನನಗದನು ತೋರಿದೆ.
ಹೇಳದೇ ನೀ ಎಲ್ಲವ ಮಾಡಿದೆ, ಕೇಳದೇ ನನಗೆಲ್ಲವ ಕೊಡಿಸಿದೆ.....
ಆ ಏಳು ಜನ್ಮದಲ್ಲಿ ನಂಬಿಕೆ ನನಗಿಲ್ಲ ಅಪ್ಪ....
ಹಾಗೇನಾದರೂ ಇದ್ದಾರೆ ಅಲ್ಲಿಯೂ ಆಗಿರು ನೀ ನನ್ನ ಅಪ್ಪ.....
---- ಅನೂಪ್
Wednesday, November 12, 2008
ನನ್ನ ಅಪ್ಪ
Subscribe to:
Post Comments (Atom)
0 comments:
Post a Comment