CLICK HERE FOR THOUSANDS OF FREE BLOGGER TEMPLATES »

Thursday, November 13, 2008

ಒಂದೇ ನೆನಪು.

ನೆನಪಿನ ಬುತ್ತಿ ಬಿಚ್ಛಿದರೆ ಕಾಡುವುದು ಒಂದೇ ನೆನಪು.
ಕಣ್ಣು ಮುಚ್ಚಿದರೆ ಕಾಣುವುದು ಒಂದೇ ನಗು.
ಕಿವಿ ಮುಚ್ಚಿ ಕುಳಿತರೆ ಕೇಳುವುದು ಒಂದೇ ಮಾತು.

ಬಡಿತದಲು ಕೇಳುತಿದೆ ನಿನ್ನ ಹೆಸರು ಚಿನ್ನ.
ಭಾವನೆಯ ಹೇಳುವುದರಲಿ ಬಿಟ್ಟು ಹೋದೆ ಏಕೆ ನನ್ನ......
ಪ್ರತಿ ಕ್ಷಣವೂ ಮನ ಕೇಳುತಿದೆ ಈಗೇಲ್ಲಿ ಇರುವಳು ವಂದನ....
ಈಗೇನು ಮಾಡುತಿಹಳು ವಂದನ......
---- ಅನೂಪ್

Wednesday, November 12, 2008

ನನ್ನ ಅಪ್ಪ

ಎಂದು ನೀ ಹೊಡೆಯಲಿಲ್ಲ, ಎಂದು ನೀ ಬೈಯ್ಯಾಲಿಲ್ಲ.
ಕಣ್ಣ ಸನ್ನೆಯಲ್ಲೇ ತಪ್ಪ ನೀ ತೂರಿದೆ, ತೀಕ್ಷ್ಣ ನೋಟದಲ್ಲೇ ಅದನ್ನು ನೀ ತಿದ್ದಿದೆ.
ಎಂದಿಗೂ ಓದು ಎಂದು ನೀ ಹೇಳಲಿಲ್ಲ, ನೀ ಓದುವ ಬಗೆಯಲ್ಲೇ ನನಗದನು ಕಲಿಸಿದೆ.
ಸದ್ಮಾರ್ಗದಲಿ ನಡೆ ಎಂದು ನೀ ಹೇಳಲಿಲ್ಲ, ನನ್ನ ಮುಂದೆ ನೀ ನಿಂತು ನನಗದನು ತೋರಿದೆ.
ಹೇಳದೇ ನೀ ಎಲ್ಲವ ಮಾಡಿದೆ, ಕೇಳದೇ ನನಗೆಲ್ಲವ ಕೊಡಿಸಿದೆ.....

ಆ ಏಳು ಜನ್ಮದಲ್ಲಿ ನಂಬಿಕೆ ನನಗಿಲ್ಲ ಅಪ್ಪ....
ಹಾಗೇನಾದರೂ ಇದ್ದಾರೆ ಅಲ್ಲಿಯೂ ಆಗಿರು ನೀ ನನ್ನ ಅಪ್ಪ.....

---- ಅನೂಪ್

ಗುರಿ

ಮೆಡಿಕಲ್ ಹುಡುಗಿಯ ಮೇಕಪ್ ಕಂಡೆ, ಮದುವೆಯ ಆಸೆಯ ಮನದಲ್ಲಿ ತಂದೆ
ಕೊಟ್ಟ ಸೂಜಿಗೇ ಹಾರ್ಟ್ ಫೈಲ್ ಆಯ್ತು, ಮೆಡಿಕಲ್ ಹುಡುಗಿಯ ಮದುವೆಯೂ ಆಯ್ತು!

BE ಹುಡುಗಿಯ ಬೇಡಗನ್ನು ಕಂಡೆ, ಬೇಡದ ಆಸೆಯ ಮನದಲ್ಲಿ ತಂದೆ
ಅವಳ ಸ್ಪೀಡಿಗೆ ತಲೆ ಕೆಟ್ಟು ಹೋಯ್ತು, ಸಿಸ್ಟಮ್ ಎಲ್ಲಾ ಕ್ರಾಷ್ ಆಗಿ ಹೋಯ್ತು!

ಹಳ್ಳಿ ಹುಡುಗಿಯ ಅಂದ ಕಂಡೆ, ನೀನೆ ನನ್ನ ಅರ್ಧಂಗಿ ಅಂದೆ
ನುಲಿಯುತ ನನ್ನ ಹೊಲಕ್ಕೆ ಕರೆದಳು, ಮಾವನಿಗೆಳಿ ಹೊಡೆ ನಾಲ್ಕೆಂದಳು!

ಕೇಳೋ ಗೆಳೆಯ ನನ್ನ ವ್ಯತೆಯ
ಮುಟ್ಟಿದರೆ ಒಮ್ಮೆ ನಿನ್ನ ಗುರಿಯ, ತರುವರು ಅವರೇ ಮದುವೆಯ ಕರೆಯ
ಅಲ್ಲಿಯ ವರೆಗು ನೋಡದೆ ಸಾಗು, ನೋಡಿದರುನೂ ಹೇಳದೇ ಹೋಗು
--ಅನೂಪ್

Tuesday, November 11, 2008

ನನ್ನಮ್ಮ

hi,

This is written by my friend Anoop

ತೊದಲು ಮಾತು ಮೊದಲು ಕೇಳಿ ಮನ ತುಂಬಿ ನಗುತಿದಳ್ಳು ನನ್ನಮ್ಮ,
ನಾ ಇಟ್ಟ ಮೊದಲ ಹೆಜ್ಜೆಯ ಕಂಡು ಕುಣಿದಾಡಿದಳು ನನ್ನಮ್ಮ,
ಮೊದಲ ಕಿರಣ ಬರುವುದಕ್ಕೂ ಮುನ್ನ ಎದ್ದು, ನಾ ಏಳುವುದನ್ನೆ ಕಾಯುತಿದಳ್ಳು ನನ್ನಮ್ಮ,
ಬೆಳೆದು ನಿಂತಿರುವೆ, ಬಿಟ್ಟು ಬಂದಿರುವೆನೆಂದು ಕಾಡುವುದು ಒಂದೇ ಪ್ರಶ್ನೆ ನನಗೆ...
ಈಗೇನು ಮಾಡುತಿಹಳು ನನ್ನಮ್ಮ..!
ಈಗೇನು ಮಾಡುತಿಹಳು ನನ್ನಮ್ಮ..!
--ಅನೂಪ್

Thursday, November 6, 2008

Live Your Dream