CLICK HERE FOR THOUSANDS OF FREE BLOGGER TEMPLATES »

Tuesday, January 20, 2009

ನೆಮ್ಮದಿ ಒಂದೇ ನನಗಿಂದು

ಅಂದದ ಹಕ್ಕಿಯ ಚಂದವ ಕಂಡು ತಂದೆನು ಹೃದಯದ ಗೂಡಿಗೆ ಅಂದು.

ಹಣ್ನನು ಕೊಟ್ಟು, ಆರೈಕೆ ಮಾಡಿ... ಕಥೆಯನು ಹೇಳಿದೆ ದಿನಕೊಂದು.

ಹಕ್ಕಿಯೂ ಬೆಳೆಯಿತು... ರೆಕ್ಕೆಯೂ ಬಲಿಯಿತು....!!!

ಹಾರಿತು ಆಕಾಶದ ಆಚೆಗೆ ಇಂದು....ಕೇಳದೆ ನಾನು ಯಾರೆಂದು....

ನೆಮ್ಮದಿ ಒಂದೆ ನನಗಿಂದು... ಹಾರಲು ಕಲಿಸಿದವ ನಾ ಎಂದು..!!!

------- ಅನೂಪ್

ಅಂದದ ಶಬ್ದವ ಚಂದವ ಕಂಡು ತಂದೇನು ಕವಿತೆಯ ಸಾಲಿಗೆ ಅಂದು.
ಪ್ರತಿ ಸಾಲಲ್ಲು ಇಟ್ಟು, ಪ್ರಾಸವ ಮಾಡಿ... ಕವಿತೆಯ ಮಾಡಿದೆ ದಿನಕ್ಕೊಂದು.
ಶಬ್ದವು ಬೆಳೆಯಿತು... ಎಲ್ಲರೂ ಬಳಸಿದರು...!!!

ಹಾರಿತು ಕವಿತೆಯ ಆಚೆಗೆ ಇಂದು... ಕೇಳದೇ ಬಳಸಿದವ್ರ್ ಯಾರೆಂದು...
ನೆಮ್ಮದಿ ಒಂದೇ ನನಗಿಂದು... ಶಬ್ದವ ಬಳಸಿದವ ನಾ ಎಂದು...!!!

--Harsha MP


ತಪ್ಪು ಮಾಡಿದೆ ನಾನು

ಕಲ್ಲನ್ನು ಶಿಲೆ ಮಾಡಬಲ್ಲ ಕಲೆಗಾರ ನಾನು, ಕೆತ್ತಿದರು ಕಲ್ಲಾಗಿ ಉಳಿದೆ ನೀನು.
ತಪ್ಪು ಮಾಡಿದೆ ನಾನು, ಕರಗದ ಕಲ್ಲಿಗೆ ಕಣ್ಣೀರು ಇಟ್ಟೆ ನಾನು.

ಕನಸನ್ನು ನನಸು ಮಾಡಬಲ್ಲ ಛಲಗಾರ ನಾನು, ಬಯಸಿದರೂ ಕನಸಾಗಿ ಉಳಿದೆ ನೀನು.
ತಪ್ಪು ಮಾಡಿದೆ ನಾನು, ಕಾಮನಬಿಲ್ಲಿಗೆ ಕೈ ಚಾಚಿದೆ ನಾನು.

ಮೀನ ಹೆಜ್ಜೆಯ ಹುಡುಕಬಲ್ಲ ಚತುರ ನಾನು, ಹುಡುಕಿದರು ಸಿಗದಷ್ಟು ದೂರ ಹೋದೆ ನೀನು.
ತಪ್ಪು ಮಾಡಿದೆ ನಾನು, ಪ್ರವಾಹದೆದುರು ಈಜ ಪ್ರಯತ್ನಿಸಿದೆ ನಾನು......
------- ಅನೂಪ್

ತಪ್ಪು ಮಾಡಿಲ್ಲ ನೀನು

ಕೆತ್ತಿದಾ ಕಲ್ಲು ಶಿಲೆ ಆಗಿದೆ ಇಂದು, ಪ್ರೀತಿ ಇಂದ ನೋಡಿದರೆ ಕಾಣುವುದು ಅವಳ ಮುಗುಳ್ನಗೂ
ತಪ್ಪು ಮಾಡಿಲ್ಲ ನೀನು, ಪ್ರೀತಿಯ ಕಣ್ನೆರಲ್ಲಿ ಕಳೆದು ಸಿಕ್ಕೇ ನೀನು.

ಬಯಸಿದೆಲ್ಲಾ ಕನಸಾಗಿಸಿದೆ ನೀನು, ಕನಸಿನಿಂದ ಎದ್ದು ಕೇಳು ಕೇಳಿಸುವುದು ಅವಳ ಕೂಗು
ತಪ್ಪು ಮಾಡಿಲ್ಲ ನೀನು, ಪ್ರೀತಿಯ ಕಾಮನಬಿಲ್ಲ ಮುರಿದು ಗೆದ್ದೆ ನೀನು.

ಮೀನಿನ ಹೆಜ್ಜೆ ಹಿಡಿದ ಬಲೆಗಾರ ನೀನು, ನೀರಿನಿಂದಾಚೇ ಹುಡುಕು ಸಿಗುವುದು ಅವಳ ಹೆಜ್ಜೆ
ತಪ್ಪು ಮಾಡಿಲ್ಲ ನೀನು, ಪ್ರೀತಿಯ ಪ್ರವಾಹದಲ್ಲಿ ಮುಳುಗಿ ಎದ್ದೆ ನೀನು.

--Harsha MP

Sunday, January 18, 2009

About Me

ನೆನಪುಗಳ ನೆರಳಲ್ಲಿ
ಸೋಲಿನ ಸುಳಿಗಳಲ್ಲಿ
ಬೆದರಿಕೆಯ ಭಯದಲ್ಲಿ
ದಾರಿ ಕಾಣದ ಅಲೆಮಾರಿ ನಾ!

ಮರೆಯಲಾರದ ದು:ಸ್ವಪ್ನಗಳಲ್ಲಿ
ಬಚ್ಚಿಟ್ಟ ನಗ್ನ ಸತ್ಯಗಳಲ್ಲಿ
ಗುರಿ ಮುಟ್ಟದ ನರಳಿಕೆಯಲ್ಲಿ
ಸುಳ್ಳಿನ ಸರಪಣಿಗಳಲ್ಲಿ ಬಂದಿತನು ನಾ!

ಗೆಳೆಯರ ನೋವಿಸುತ
ಪ್ರೇಮಿಗಳ ಅಗಲಿಸುತ
ಬಂಧುಗಳ ವಂಚಿಸುತ
ಜನಸಾಗರದಿಂದ ತಿರಸ್ಕ್ರುತನು ನಾ!

ನವ ಆರಂಭವ ನೋಡುವ ಕಾತರದಿ ಕಾದು ನಿಂತಿಹ
ನಿಮ್ಮ ಬಸವಾ......

My Comments

ನಾಳೆಯ ನಿರೀಕ್ಷೆಯಲ್ಲಿ...
ಗೆಲುವಿನ ಗದ್ದುಗೆಯಲ್ಲಿ..
ವಿಶ್ವ ಗೆಲ್ಲುವ ವಿಶ್ವಾಸದಲ್ಲಿ...
ದಾರಿ ತೋರುವ ಆಲೆಮಾರಿ ನೀನಾಗು...

ದುಸ್ವಪ್ನಗಳ ಮರೆತು...
ನಜ್ಞ ಸತ್ಯಗಳ ಸುಟ್ಟು...
ಗುರಿ ಮುಟ್ಟುವ ಹಂಬಲ ದಲ್ಲಿ...
ಕಷ್ಟದ ಸರಪಣಿಗಳಾ ಬಿಡಿಸಿ ಮುನ್ನುಗು ನೀ...

ಗೆಳೆಯರ ಬೆನ್ನೆಲುಬಾಗಿ....
ನಿಸ್ವಾರ್ತ ಪ್ರೀತಿಯ ಸವಿಯುತ್ತಾ...
ಬಂದುಗಳ ನೆನೆಯುತ್ತ...
ಜನಸಾಗರದಲ್ಲಿ ಎದ್ದು ನಿಲ್ಲುವಂತವನಾಗೂ...

ನಿನ್ನ ಆರಂಬವ ನೋಡುವ ಹರುಷದಲ್ಲಿ ಇದ ಬರೆದು ಕೂತಿರುವೆ...
ನಿನ್ನ ಗೆಳೆಯ...