ನನ್ನ ಕವಿತೆಗಳಿವು ಶಬ್ಧಗಳ ಜೂಡಣೆ ಅಲ್ಲ...
ಸಮಯ ಕೆಳೆಯಲು ಬರೆದ ಪಡಾಕುಂಜ ವಲ್ಲ..
ಅಂತರಂಗದ ಅಂತರಾಳದಿಂದ ಬಂದ ನೋವು ತುಂಬಿದ ಭಾವನೆಗಳು...
ಉಲ್ಲಾಸ ವಿಲ್ಲದ ಮಾನಸಿನಿಂದ ಆದ ಗುಣವಾಗದ ಗಾಯಗಳು...
ನಿದ್ದೆ ಬಾರದೆ ಕಳೆದ ಕರಾಳ ರಾತ್ರಿಯ ಅನುಭವಗಳು...
ಹೇಳಲಾಗಾದೇ.. ಪರಿತಪಿಸಲಾಗಾದೇ ಹೃದಯದಿಂದ ಹಾಗೆ ಜಾರಿದ ಕಣ್ಣೀರ ಹನಿಗಳು..
------- ಅನೂಪ್
My ಕಾಮೆಂಟ್ಸ್
ಸ್ನೇಹದ ನುಡಿಗಳು
ನನ್ನ ಸ್ನೇಹ ನುಡಿ ಇದು ನಿನಗೆ ಸಮಾಧಾನ ಅಲ್ಲ...
ನನ್ನ ನಾ ಕವಿ ಆಗಿಸಲು ಬರೆದ ಪ್ರತಿ ಕವನ ವಲ್ಲ....
ಸ್ನೇಹದ ಸಂಕೋಲೇಗೆ ಕಟ್ಟುಬಿದ್ದು ಬಂದ ಪ್ರೀತಿಯ ಬೈಗುಳಗಳು...
ಕೊರಗಬೇಡ ಹಳೆಯ ಗಾಯಗಳಿಗೆ, ಹಳೆಯ ಕರಾಳ ದಿನಗಳಿಗೆ...
ಹೊರಡು ಹೋರಾಡಲು ಬರುವ ದಿನಗಳಿಗೆ, ಬರುವ ಕಷ್ಟಗಳಿಗೆ...
ನೋಡಲಾಗದೇ ತುಟಿಗಳಿಂದ ಹಾಗೆ ಜಾರಿದ ಸ್ನೇಹದ ನುಡಿಗಳು...