Wednesday, September 24, 2008
Friday, September 12, 2008
Rainbow
ಎಡದಿಂದ ಬಲಕ್ಕೆ: ಮಾಸ್ತಿ ವೆಂಕಟೇಶ ಅಯ್ಯಂಗಾರ್, ಡಿ.ವಿ. ಗುಂಡಪ್ಪ, ಕುವೆಂಪು, ವಿ. ಸೀತಾರಾಮಯ್ಯ, ಕೆ. ಶಿವರಾಮ ಕಾರಂತ, ಅ.ನ. ಕೃಷ್ಣರಾವ್ ಮತ್ತು ಜಿ.ಪಿ.ರಾಜರತ್ನಂ.
ಛಾಯಾಚಿತ್ರ ಕ್ಲಿಕ್ಕಿಸಿದ ಟಿ.ಎಸ್. ನಾಗರಾಜನ್
Posted by Unknown at 2:26 AM 0 comments
Monday, September 1, 2008
ಕಾಪಿ paste
SOURCE: http://www.sampada.net
--------------------------------------------------------------------------------
ಏಕೆ?
August 31, 2008 - 12:51pm — Shrikantkalkoti
ವರುಷಗಳೇ ಕಳೆದವು ಆ ದಿನಗಳು ಉರುಳಿ
ಆದರೂ ನಿನ್ನ ಕಣ್ಣಲ್ಲಿ ಅವಳ ನಿರೀಕ್ಷೆಯೇಕೆ
ನಿನ್ನ ಪ್ರೀತಿಯ ಕಂಡೂ ಕಾಣದವರು
ನೆನೆಯಲು ಇನ್ನೂ ಅರ್ಹರೇ? ಏಕೆ
ನಿನ್ನ ಪ್ರೀತಿಗೆ ಯಾರು ದ್ರೋಹ ಬಗೆದರೋ
ಅವರ ಸ್ಥಿರಚಿತ್ರ ನಿನ್ನ ಬಳಿಯೇಕೆ
ನಿನ್ನ ಹೂವಂತಹ ಹ್ರದಯದಲಿ
ಆ ಬಾಡಿದ ಪ್ರೀತಿಯ ನೆನಪುಗಳೇಕೆ
ಯಾರು ನಿನ್ನ ಭಾವನೆಗಳನ್ನರಿಯದೇ ಹೊದರೋ
ಅವರ ಅಧಿಕಾರ ನಿನ್ನ ಹ್ರದಯದ ಮೇಲೆ ಇನ್ನೂ ಏಕೆ
ಯಾವ ಸಂಬಂಧ ಮುಗಿ(ರಿ)ದು ಹೋಯಿತೋ
ಅದು ಈಗಲೂ ನಿನ್ನ ಉಸಿರಾಗಿರುವುದೇಕೆ
ನಿನ್ನ ವರ್ತಮಾನದಲ್ಲೇ ಇರುವವರು
ನಿನ್ನ ಪಾಲಿಗೆ ಅತೀತ (ಅತೀ ಅತ್ತ)ವಾದುದೇಕೆ ?
--------------------------------------------------------------------------
ಸದಾ ನಿನ್ನ ಜೊತೆ
June 13, 2007 - 12:58pm — mahesha
ಸದಾ ಕಣ್ಮುಂದೆ ನಿನ್ನ ಬಿಂಬ
ಸದಾ ಕಿವಿಯಲ್ಲಿ ನಿನ್ನ ಗುನುಗು
ಸದಾ ಮನದಲ್ಲಿ ನಿನ್ನ ನೆನಪು
ಸದಾ ತೋಳಲ್ಲಿ ನಿನ್ನ ಅಪ್ಪುಗೆ ||
ಸದಾ ನಿನ್ನ ಈ ಒಡನಾಟ
ಸದಾ ನಿನ್ನ ಜೊತೆ ಊಟ
ಸದಾ ನಿನ್ನ ಜೊತೆ ಸಿನಿಮಾ
ಸದಾ ನಿನ್ನ ಜೊತೆ ಪೋನ್ಮಾತು||
ಯಾಕೋ ಇವೆಲ್ಲ ತೀರಾ ಆಗಿ
ಸಕ್ಕತ್ ಬೋರಾಗಿ ಹೋಯ್ತು
ಏಕೆಂದ್ರೆ Lifeಅಲ್ಲಿ changeಬೇಕು
ಅದಕ್ಕೆ ಕೊನೆ ಸರತಿ ಟಾಟಾ bye bye Smiling ||
------------------------------------------------------------------------------
ಬೆಚ್ಚಗೆ ನಿನ್ನ ನೆನಪು
August 19, 2008 - 7:42pm — veeravenki
ಮುಂಜಾನೆಯ ಚಳಿಯಲ್ಲಿ ಬೆಚ್ಚಗೆ ನಿನ್ನ ನೆನಪು
ನೆನೆ ನೆನೆದು ನಿನ್ನ ಹೆಸರ ಕನವರಿಸುತಿದೆ ಮನವು
ಹುಡುಕಿದರೂ ಸಿಗಲಿಲ್ಲ ಎಲ್ಲು ನಿನ್ನ ಸುಳಿವು
ಮನದಾಳದಲ್ಲಿ ಕಾಡುತಿದೆ ನೀ ಬಿಟ್ಟು ಹೋದ ಒಲವು
ಸೂರ್ಯನು ಬರುವ ಮುಂಚೆಯೇ ನಿನ್ನ ನೋಡಬೇಕೆಂಬ ಕಾತುರ
ಮಲ್ಲಿಗೆ ಅರಳುವ ಮುನ್ನ ನಿನ್ನ ಮಾತಾಡಿಸಬೇಕೆಂಬ ಆತುರ
ನಿನ್ನ ಇಷ್ಟು ಕಾಡೋಕೆ ಕಾರಣ ನೀ ಕೊಟ್ಟ ಸದರ
ನಿನ್ನ ಜೊತೆ ನಾ ಕಳೆದ ಕಾಲ ಬಲು ಮಧುರ
-Vರ ( Venkatesha ರಂಗಯ್ಯ )
-------------------------------------------------------------------------------------
ಮಾಯೆ
August 31, 2008 - 12:46pm — Shrikantkalkoti
ನಿನ್ನ ಮೊಗದ ನಗುವಿಗಾಗಿ ಕ್ಷಣ ಕ್ಷಣ ನಾ ಜಪಿಸುವೆ
ಆ ಕ್ಷಣದ ನಗುವಿನಲ್ಲಿ ಪ್ರತಿ ಕ್ಷಣ ನಾ ಬದುಕುವೆ
ನಿನ್ನ ಮಧುರ ಮಾತುಗಳಲಿ ನನ್ನೇ ನಾ ಮರೆಯುವೆ
ಆ ಮುತ್ತಿನ ಪ್ರತಿ ಶಬ್ದದಲ್ಲಿ ನನ್ನ ಹೆಸರ ಹುಡುಕುವೆ
ನಿನ್ನ ಓರೆಗಣ್ಣಿನ ನೋಟಕ್ಕಾಗಿ ಹಗಲಿರುಳೂ ಕಾಯುವೆ
ಆ ಒಂದು ನೋಟವನ್ನು ದಿನವೆಲ್ಲಾ ಸ್ಮರಿಸುವೆ
ತುಟಿಗಳಲಿ ಬರುವ ಹೆಸರಿಗಾಗಿ ತುದಿಗಾಲಲಿ ನಿಲ್ಲುವೆ
ಆ ಹೆಸರು ನನ್ನದೆನಲು ಆಗಸದಿ ತೇಲಾಡುವೆ
ನಮ್ಮ ನಡುವೆ ನಡೆದ ತಮಾಷೆಗಳನ್ನು ಪದೇ ಪದೇ ನೆನೆಯುವೆ
ಅದರಿಂದಾದ ಮುನಿಸು ನೆನೆಸಿ ಮುಗುಳ್ನಗೆಯ ಬೀರುವೆ
------------------------------------------------------------------------------------
Posted by Unknown at 4:20 AM 0 comments